ಕುಂದಾಪುರ: ಖಿನ್ನತೆಗೊಳಗಾಗಿ ಕೊಲ್ಲೂರಿನ ಕಾಡಿನಲ್ಲಿ ತಿರುಗಾಡುತ್ತಿದ ಯುವತಿಯ ರಕ್ಷಣೆ

ಕುಂದಾಪುರ: ಮಾನಸಿಕವಾಗಿ ನೊಂದು ಕೊಲ್ಲೂರಿನ ಕಾಡಿನಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಅಪರಿಚಿತ ಯುವತಿಯನ್ನು ಮಂಗಳವಾರದಂದು ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರು, ರಿಕ್ಷಾ ಚಾಲಕರು ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್‌ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ. ಯುವತಿ ತನ್ನ ಹೆಸರು ಅರ್ಚನಾ (28) ಎಂದೂ, ಹುಟ್ಟೂರು ಕೇರಳದ ಚರ್ವತ್ಕಲ್ ಎಂದೂ ಅಸ್ಪಷ್ಟ ಮಾಹಿತಿ ನೀಡಿದ್ದಾಳೆ. ಈಕೆ ಕೊಲ್ಲೂರಿನ ಸಲಗೇರಿ ಬಳಿ ಅರಣ್ಯದಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಕೊಲ್ಲೂರು […]
ಅಂಗವಿಕಲ ಮಗಳನ್ನು ಮರೆತ ಕುಟುಂಬ: ಮತ್ತೆ ಅಪತ್ಭಾಂಧವರಾದ ವಿಶು ಶೆಟ್ಟಿ

ಉಡುಪಿ : ತಾಯಿ ಅನಾರೋಗ್ಯ ಪೀಡಿತೆ ಎಂದು ಆಕೆಯ ಅಂಗವಿಕಲೆ ಮಗಳನ್ನು ಹೆಬ್ರಿ ರಾಘವೇಂದ್ರ ಆಸ್ಪತ್ರೆಯಲ್ಲಿ ದಾಖಲಿಸಿ ಕೈ ತೊಳೆದುಕೊಂಡ ಶಂಕರನಾರಾಯಣ ಮೂಲದ ಕುಟುಂಬವೊಂದು ಇದೀಗ ಜಾಣ ಕುರುಡು ತೋರಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ವಿದ್ಯಮಾನ ನಡೆದಿದ್ದು, ಆಪದ್ಭಾಂಧವ ವಿಶು ಶೆಟ್ಟಿ ಅವರು ಇದೀಗ ಎರಡನೇ ಬಾರಿಗೆ ಸ್ಪಂದಿಸಿ ಯುವತಿಯನ್ನು ಕಾರ್ಕಳ ಆಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆ ಮತ್ತು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ. ಭಿನ್ನ ಸಾಮರ್ಥ್ಯ ಅಂಗವಿಕಲೆ ಯುವತಿಯ ಬಗ್ಗೆ ಕುಟುಂದವರಿಗೆ ಪೋನ್ ಮೂಲಕ ಸಂಪರ್ಕಿಸಿದರೆ ಯುವತಿಗೂ […]