ಇನ್ನಂಜೆ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆಗೆ ಗ್ರಾಮಸ್ಥರಿಂದ ಮನವಿ

ಕಾಪು: ಕಾಪು ತಾಲ್ಲೂಕಿನ ಇನ್ನಂಜೆ ರೈಲು ನಿಲ್ದಾಣದಲ್ಲಿ ಮುಂಬೈ ಮತ್ತು ಬೆಂಗಳೂರು ರೈಲುಗಳಿಗೆ ನಿಲುಗಡೆ ನೀಡಬೇಕೆಂದು ಇನ್ನಂಜೆ ರೈಲು ನಿಲ್ದಾಣ ಅವಲಂಬಿತ ಗ್ರಾಮಸ್ಥರು ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆಯವರಿಗೆ ಮನವಿಯನ್ನು ಸಲ್ಲಿಸಿದರು. ಇನ್ನಂಜೆ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆರಿದ್ದರೂ ಕೇವಲ ಒಂದು ಲೋಕಲ್ ರೈಲು ನಿಲುಗಡೆ ಆಗುತ್ತಿದ್ದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾದ ಮುಂಬೈ ಹಾಗೂ ಬೆಂಗಳೂರು ರೈಲು ನಿಲುಗಡೆ ಆಗುತ್ತಿಲ್ಲ. ಎರಡು ಲೋಕಲ್ ರೈಲುಗಳಿಗೆ ನಿಲುಗಡೆ ಇದ್ದರೂ ಕೂಡ ಸದ್ಯ ಕೇವಲ ದು ಲೋಕಲ್ ರೈಲು […]