ಅರ್ಧ ಶತಕ ಬಾರಿಸಿದ ಕಾಂತಾರ: ಪಂಜುರ್ಲಿ ಮತ್ತು ಗುಳಿಗ ದೈವದ ಆಶೀರ್ವಾದವೆಂದ ರಿಷಬ್ ಶೆಟ್ಟಿ

ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಚಿತ್ರವೊಂದು ಎಷ್ಟು ಕೋಟಿ ಗಳಿಸಿತು ಎನ್ನುವುದನ್ನೇ ಲೆಕ್ಕ ಹಾಕುತ್ತಿದ್ದ ಈ ದಿನಗಳಲ್ಲಿ, ಹಿಂದಿನಂತೆ ಚಿತ್ರ ಎಷ್ಟು ದಿನ ಓಡಿತು ಎಂದು ಕೇಳುವುದನ್ನು ಮರೆತೇ ಬಿಟ್ಟಿದ್ದ ಕಾಲಘಟ್ಟದಲ್ಲಿ ಕಾಂತಾರ ಚಿತ್ರವು 50 ದಿನಗಳನ್ನು ಪೂರೈಸಿರುವುದು ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ […]