ವೈರಲ್ ಆದ ವಿಡಿಯೋ ಆಂಧ್ರಪ್ರದೇಶದ್ದು, ಉಡುಪಿ ಉತ್ಸವದ್ದಲ್ಲ :ಉತ್ಸವದ ಮುಖ್ಯಸ್ಥರ ಸ್ಪಷ್ಟನೆ

ಉಡುಪಿ: ತಿರುಗುತ್ತಿರುವ ಜಾಯಿಂಟ್ ವೀಲ್ ತುಂಡಾಗಿ ಮಕ್ಕಳು ಕೆಳಕ್ಕೆ ಬೀಳುವ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ವೈರಲ್ ಆಗಿತ್ತು. ಘಟನೆ ನಡೆದದ್ದು ಉಡುಪಿಯ ಕಲ್ಸಂಕದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಉಡುಪಿ ಉತ್ಸವದಲ್ಲಿ ಎನ್ನುವ ಸುಳ್ಳು ಸುದ್ದಿಗಳು ಎಲ್ಲೆಡೆ ಹಬ್ಬಿ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಉಡುಪಿ ಉತ್ಸವಕ್ಕೂ, ಈ ವಿಡಿಯೋಗೂ ಸಂಬಂಧವೇ ಇಲ್ಲ. ಇದು ಆಂದ್ರಪ್ರದೇಶದಲ್ಲಿ ಯಾವತ್ತೋ ನಡೆದಿದ್ದ ಘಟನೆಯಾಗಿದ್ದು ಉಡುಪಿ ಉತ್ಸವದಲ್ಲಿ ನಡೆದದ್ದಲ್ಲ ಎನ್ನುವ ಸತ್ಯ ಹೊರಬಿದ್ದಿದೆ. ಈ ಕುರಿತು ಉಡುಪಿ ಉತ್ಸವದ ನಿರ್ವಹಣಾ […]