ಕೊರೊನಾ ರೋಗಿಯನ್ನು ಕೊಲೆಗೈದಿದ್ದಾರೆಂಬ ವಿಡಿಯೋ ವೈರಲ್: ಈ ವಿಡಿಯೋದ ಅಸಲಿಯತ್ತೇನು.?
ಬೆಂಗಳೂರು: ಕೊರೊನಾ ಸೋಂಕಿನ ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಈ ನಡುವೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳನ್ನು ಹರಿಬಿಟ್ಟು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡುತ್ತಿರುವ ಸಂಗತಿಗಳು ಬೆಳಕಿಗೆ ಬಂದಿದೆ. ಆಸ್ಪತ್ರೆಯೊಂದರಲ್ಲಿ ದುಡ್ಡಿಗಾಗಿ ರೋಗಿಯ ಕತ್ತುಹಿಸುಕು ಸಾಯಿಸಿದ್ದಾರೆ ಎನ್ನಲಾದ ವಿಡಿಯೋ, ಮತ್ತೊಂದು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ರೋಗಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಡಿಯೋ ತುಣುಕು ಜೊತೆಗೆ ಯುವತಿಯೊಬ್ಬಳು ತನ್ನ ತಂದೆಯನ್ನು ಕಳೆದುಕೊಂಡು ಅಳಲುತ್ತಿದ್ದ ವಿಡಿಯೋವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ಅದು ವೈರಲ್ […]