ಈಜು ಸ್ಪರ್ಧೆಯಲ್ಲಿ ಭಾರತಕ್ಕೆ 5 ಚಿನ್ನದ ಪದಕಗಳನ್ನು ಗೆದ್ದ ನಟ ಆರ್.ಮಾಧವನ್ ಪುತ್ರ ವೇದಾಂತ್ ಮಾಧವನ್

ಚೆನ್ನೈ: ಸಾಮಾನ್ಯವಾಗಿ ತಂದೆ-ತಾಯಿ ಯಾವ ವೃತ್ತಿಯಲ್ಲಿರುತ್ತಾರೋ ಮಕ್ಕಳೂ ಕೂಡಾ ಅದೇ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಅದರಲ್ಲೂ ಚಿತ್ರತಾರೆಯರು, ರಾಜಕಾರಣಿಗಳು ಮತ್ತು ಕ್ರಿಕೆಟ್ ಆಟಗಾರರ ಮಕ್ಕಳಂತೂ ಕೈ ತುಂಬಾ ಹಣ ಸಂಪಾದಿಸುವ ತಂದೆಯ ಕ್ಷೇತ್ರವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಇದಕ್ಕಿಂತ ಭಿನ್ನವಾಗಿ ಬಹುಭಾಷಾ ಚಿತ್ರನಟ ಆರ್. ಮಾಧವನ್ ಮಗ ವೇದಾಂತ್ ಮಾಧವನ್ ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ದೇಶಕ್ಕಾಗಿ ಚಿನ್ನ ಗೆಲ್ಲುತ್ತಿದ್ದಾನೆ. ಮಾಧವನ್ ಪುತ್ರ ವೇದಾಂತ್ ಮಾಧವನ್ ಮಲೇಷಿಯಾದ ಆಹ್ವಾನಿತ ವಯೋಮಾನದ ಚಾಂಪಿಯನ್‌ಶಿಪ್‌ನಲ್ಲಿ ಈಜುವುದರಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದು ತಂದೆ […]