ಮೈಕ್ರೋಸಾಫ್ಟ್ ‘ಬ್ಲೂಸ್ಕ್ರೀನ್ ಸಡನ್ ಡೆತ್’ ತಾಂತ್ರಿಕ ದೋಷ: ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ವಿಮಾನಯಾನ, ಸಾಫ್ಟ್ ವೇರ್, ಬ್ಯಾಕಿಂಗ್ ಸೇವೆ ಸ್ಥಗಿತ.

ಮೈಕ್ರೋಸಾಫ್ಟ್ ನ ಸೇವೆಗಳಲ್ಲಿ ಉಂಟಾದ, ‘ಬ್ಲೂಸ್ಕ್ರೀನ್ ಸಡನ್ ಡೆತ್’ ಎಂಬ ತಾಂತ್ರಿಕ ದೋಷದಿಂದಾಗಿ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ವಿಮಾನ ನಿಲ್ದಾಣಗಳು, ವಿಮಾನ ಸೇವೆಗಳು, ಷೇರು ಮಾರುಕಟ್ಟೆಗಳು, ಬ್ಯಾಂಕಿಂಗ್ ಸೇವೆಗಳು, ಹೋಟೆಲ್ ಸೇವೆಗಳು ಸೇರಿದಂತೆ ಎಲ್ಲಾ ರೀತಿಯ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿವೆ. ಸರ್ಕಾರಿ ಕಚೇರಿಗಳಲ್ಲಿನ ಸೇವಾ ಕೇಂದ್ರಗಳೂ ಸ್ವಯಂಚಾಲಿತವಾಗಿ ಸ್ತಬ್ಧವಾಗಿವೆ. ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅದರಿಂದಾಗಿ, ಒಂದು ದೇಶದಿಂದ ಮತ್ತೊಂದು […]