ವಂದೇ ಮಾತರಂ‌: ವೀಡಿಯೋ ಹಾಡು ಮೂಲಕ ಪ್ಲಾಸ್ಟಿಕ್ ದುಷ್ಪರಿಣಾಮ: ಸ್ವಚ್ಛತೆಯ‌ ಅರಿವು  

ಉಡುಪಿ: ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮ ಹಾಗೂ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ ಹಾಗೂ ಲೈಫ್‌ ಲೈಕ್‌ ಪ್ರೊಡಕ್ಷನ್‌ ಜಂಟಿಯಾಗಿ ‘ವಂದೇ ಮಾತರಂ’ ವಿಡಿಯೋ ಹಾಡೊಂದನ್ನು ತಯಾರಿಸಿದ್ದು, ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಭೂದೇವಿ ಪ್ಲಾಸ್ಟಿಕ್‌ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಕಥಾ ಹಂದರವನ್ನು ಇಟ್ಟುಕೊಂಡು ಹಾಡನ್ನು ಚಿತ್ರಕರಿಸಲಾಗಿದ್ದು, ಇದಕ್ಕೆ ವಂದೇ ಮಾತರಂ ಹಾಡನ್ನು ಬಳಸಿಕೊಳ್ಳಲಾಗಿದೆ. 3.4 ನಿಮಿಷ ಅವಧಿಯ ಈ ಹಾಡಿನಲ್ಲಿ ಭೂಮಿ ಕಾಯುವ […]