ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಕೋಟ: ವಡ್ಡರ್ಸೆ ರಘುರಾಮ ಶೆಟ್ಟಿಯವರು ಈ ನಾಡು ಕಂಡ ಹೆಮ್ಮೆಯ ಸಮಾಜವಾದಿ ನಿಲುವಿನ ಪತ್ರಕರ್ತರಾಗಿದ್ದು ಅವನರನ್ನು ಇಡೀ ರಾಜ್ಯವೇ ಗೌರವಿಸುತ್ತದೆ. ಹೀಗಾಗಿ ಹುಟ್ಟೂರಿನಲ್ಲಿ ವಡ್ಡರ್ಸೆಯವರ ನೆನಪುಗಳು ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಕೋಟ- ಸಾಬ್ರಕಟ್ಟೆ ಜಿಲ್ಲಾ ಮುಖ್ಯ ರಸ್ತೆಗೆ ಅವರ ಹೆಸರಿಡಬೇಕು ಎನ್ನುವ ಬೇಡಿಕೆಯನ್ನು ಬ್ರಹ್ಮಾವರ ಪತ್ರಕರ್ತರ ಸಂಘದವರು ಮುಂದಿರಿಸಿದ್ದು ಇದು ಅತ್ಯಂತ ಸಮಂಜಸವಾಗಿದೆ. ಈ ಕುರಿತು ತಾ.ಪಂ. ವತಿಯಿಂದ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು . ಬ್ರಹ್ಮಾವರ ತಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದರು. […]