ಗೆಳೆಯ ಮಧುಕರ್ ಶೆಟ್ಟಿಯವರ ಸ್ಮಾರಕ ನಿರ್ಮಿಸಲು ಸರಕಾರದ ಚಿಂತನೆ : ಸಚಿವ ಖಾದರ್

ಕುಂದಾಪುರ: ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿಯವರ ಸ್ಮಾರಕ ನಿರ್ಮಿಸಲು ಸಂತೋಷ್ ಹೆಗ್ಡೆಯವರು ಆಗ್ರಹಿಸಿದ್ದಾರೆ. ಸಂತೋಷ್ ಹೆಗ್ಡೆಯವರ ಮಾತಿಗೆ ನನ್ನ ಸಂಪೂರ್ಣ ಬೆಂಬಲಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದರು. ಭಾನುವಾರ ಯಡಾಡಿಗೆ ಭೇಟಿ ನೀಡಿ ಐಪಿಎಸ್ ಮಧುಕರ್ ಶೆಟ್ಟಿ ಪಾರ್ಥೀವ ಶರೀರ ದರ್ಶನ ಮಾಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಗೆಳೆಯನನ್ನು ಕಳೆದುಕೊಂಡ ದುಃಖ: ಐದನೇ ತರಗತಿಯಿಂದ ಜೊತೆಯಾಗಿ ಓದಿದ್ದೆವು. ನನ್ನ […]