ಬಿಜೆಪಿ ಶಾಸಕರ ಅಮಾನತು ರಾಜ್ಯದ ಇತಿಹಾಸದಲ್ಲೇ ಕಪ್ಪು ಚುಕ್ಕೆ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ದೇಶದೆಲ್ಲೆಡೆ ಕುಖ್ಯಾತರಾಗಿರುವ ಹಲವಾರು ಭ್ರಷ್ಟ ರಾಜಕೀಯ ಮುಖಂಡರನ್ನು ಬೆಂಗಳೂರಿಗೆ ಕರೆಸಿ ನಡೆಸಿರುವ ಕಾಂಗ್ರೆಸ್ ಪಕ್ಷದ ಸ್ವಯಂ ಸ್ವಾರ್ಥದ ರಾಜಕೀಯ ಸಮಾವೇಶಕ್ಕೆ ಸರಕಾರದ ಐಎಎಸ್ ಅಧಿಕಾರಿಗಳನ್ನು ನಿಯಮ ಬಾಹಿರವಾಗಿ ಬಳಸಿರುವ ಕ್ರಮದ ಕುರಿತು ವಿವರಣೆ ಕೇಳಿದ್ದ ಬಿಜೆಪಿಯ 10 ಶಾಸಕರನ್ನು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆಂಬ ನೆಪವೊಡ್ಡಿ ಸರ್ವಾಧಿಕಾರಿ ಧೋರಣೆಯಿಂದ ಸದನದಿಂದ ಅಮಾನತುಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಈ ಬಾರಿಯ ಪ್ರಥಮ ಅಧಿವೇಶನದಲ್ಲೇ ನಡೆದ ಈ ಘಟನೆ ರಾಜ್ಯದ ಇತಿಹಾಸದಲ್ಲೇ ಕಪ್ಪು ಚುಕ್ಕೆ ಎಂದು ಬಿಜೆಪಿ ಉಡುಪಿ […]
ಸತತ ಐದನೇ ಬಾರಿ ಗೆಲುವು ದಾಖಲಿಸಿದ ಯುಟಿ ಖಾದರ್

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯುಟಿ ಖಾದರ್ ಮಂಗಳೂರು ಕ್ಷೇತ್ರದಲ್ಲಿ 82,637 ಮತಗಳನ್ನು ಪಡೆಯುವ ಮೂಲಕ ಸತತ ಐದನೇ ಗೆಲುವು ದಾಖಲಿಸಿದ್ದಾರೆ. ಎನ್.ಐ.ಟಿ.ಕೆನಲ್ಲಿ ಮತ ಎಣಿಕೆ ಆರಂಭವಾದಾಗಿನಿಂದ ಖಾದರ್ ಮುನ್ನಡೆ ಕಾಯ್ದುಕೊಂಡಿದ್ದರು. ಇದೇ ವೇಳೆ ಬಿಜೆಪಿಯ ಸತೀಶ್ ಕುಂಪಲ 59,660 ಮತಗಳನ್ನು ಪಡೆದಿದ್ದಾರೆ.