ಕೋವಿಡ್ 19ನಿಂದ ಆಶಾ ಕಾರ್ಯಕರ್ತೆಯರ ಮೌಲ್ಯ ಜಗತ್ತಿಗೆ ಅನಾವರಣ: ರಾಘವೇಂದ್ರ ಕಿಣಿ
ಉಡುಪಿ: ಕೋವಿಡ್ 19 ಮಾರಕ ಸೋಂಕು ಅವರಿಸುತ್ತಿದ್ದಂತೆ ಮನುಷ್ಯನ ಜೀವನ ಶೈಲಿಯ ಮೇಲೆ ಗಮನಾರ್ಹ ಬದಲಾವಣೆಗಳನ್ನು ತಂದಿದಲ್ಲದೆ, ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಾಮಾನ್ಯ ಜನರನ್ನು ಜಾಗೃತಗೊಳಿಸುವ ಆಶಾ ಕಾರ್ಯಕರ್ತೆಯರ ಕಾರ್ಯವೂ ಜಗತ್ತಿಗೆ ಅನಾವರಣಗೊಂಡಿತು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಹೇಳಿದರು. ಅವರು ಭಾನುವಾರ ಉಡುಪಿ ಇಂದ್ರಾಳಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ನಗರ ಅರೋಗ್ಯ ಅಭಿಯಾನ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂದ್ರಾಳಿ, ಸಗ್ರಿ, […]