ಉಪ್ಪಿನಕುದ್ರು ಒಂದನೇ ವಾರ್ಡ್: ಅಕ್ರಮವಾಗಿ ತಲೆಎತ್ತಿದ ವಾಣಿಜ್ಯ ಸಂಕೀರ್ಣ ಕಟ್ಟಡ ತೆರವಿಗೆ ತಲ್ಲೂರು ಗ್ರಾಮ ಸಭೆಯಲ್ಲಿ ನಿರ್ಣಯ

ಕುಂದಾಪುರ: ಉಪ್ಪಿನಕುದ್ರು ಒಂದನೇ ವಾರ್ಡ್ ಪರಿಸರದಲ್ಲಿ ಅಕ್ರಮವಾಗಿ ತಲೆಎತ್ತಿದ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ತೆರವುಗೊಳಿಸುವಂತೆ ಹಿಂದೆ ನಡೆದಿರುವ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದುವರೆಗೂ ಕಟ್ಟಡವನ್ನು ತೆರವುಗೊಳಿಸಿಲ್ಲ. ಪಂಚಾಯತ್ ನಿರ್ಣಯ ಕೇವಲ ಕಡತಗಳಿಗಷ್ಟೇ ಸೀಮಿತವಾಗಿಬಿಟ್ಟದೆ. ಕಾನೂನುಬಾಹಿರವಾಗಿರುವ ಈ ಕಟ್ಟಡಕ್ಕೆ ವಿದ್ಯುತ್ ಅನ್ನು ಪೂರೈಕೆ ಮಾಡಲಾಗಿದೆ. ಪಂಚಾಯತ್ ಆಡಳಿತಕ್ಕೆ ಅಕ್ರಮವಾಗಿ ಕಟ್ಟಿರುವ ಕಟ್ಟಡ ತೆರವಿಗೊಳಿಸಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಗ್ರಾಮಸ್ಥ ಚಂದ್ರಮ ತಲ್ಲೂರು ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಬೆಳಗ್ಗೆ ತಲ್ಲೂರು ಅಂಬೇಡ್ಕರ್ ಭವನದಲ್ಲಿ ನಡೆದ ತಲ್ಲೂರು ಗ್ರಾಮಪಂಚಾಯಿತಿ ಗ್ರಾಮಸಭೆಯಲ್ಲಿ […]