ಆ.‌4ರಂದು‌ ಉಡುಪಿಯಲ್ಲಿ ಪಚ್ಚೆವನ ಸಿರಿ ಅಭಿಯಾನ ಉದ್ಘಾಟನೆ

ಉಡುಪಿ: ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರವು ವಿವಿಧ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡಿರುವ ‘ಹಸಿರು ಕಲ್ಯಾಣದತ್ತ ನಮ್ಮ ನಡೆ ಪಚ್ಚೆವನ ಸಿರಿ ಅಭಿಯಾನದ ಉದ್ಘಾಟನೆ ಹಾಗೂ ವಿಚಾರ ಸಂಕಿರಣ ಆ.‌4ರಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಹಾಲ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ. ಎಸ್‌.ಎ. ಕೃಷ್ಣಯ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮ ಅಂದು ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಕಲ್ಬರಹದಿಂದ ತಾಡೋಲೆಗೆ: ಕೊರೆದು ಬರೆದ ಆರ್ಕೈವ್ಸ್‌ ಪ್ರತಿ ಹಾಗೂ ಶಾಸನಗಳ ಪಡಿಅಚ್ಚು ಬಿಡುಗಡೆ […]