Tag: #udupixpress #mangalore
-
ಮಂಗಳೂರು: ಕರಾವಳಿಯಾದ್ಯಂತ ಭಾರೀ ಮಳೆ: ತೀವ್ರಗೊಂಡ ಕಡಲ್ಕೊರೆತ
ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಹೀಗಾಗಿ ಕಡಲ್ಕೊರೆತ ತೀವ್ರಗೊಂಡಿದ್ದು, ಮಂಗಳೂರು ಹೊರವಲಯ ಉಳ್ಳಾಲ ವ್ಯಾಪ್ತಿಯ ಸೋಮೇಶ್ವರ ಬೆಟ್ಟಂಪಾಡಿಯಲ್ಲು ಅಲೆಗಳ ರಭಸಕ್ಕೆ ರಸ್ತೆ ಸಮುದ್ರ ಪಾಲಾಗಿದೆ. ಸೋಮೇಶ್ವರ, ಉಚ್ಚಿಲ, ಕೈಕೊ ಪ್ರದೇಶದಲ್ಲಿ ಕಡಲ್ ಕೊರೆತ ತೀವ್ರಗೊಂಡಿದೆ. ಅನೇಕ ಮನೆಗಳು ಅಪಾಯದ ಅಂಚಿನಲ್ಲಿದೆ. ಈಗಾಗಲೇ ಜಿಲ್ಲಾಡಳಿತ ಮೀನುಗಾರರಿಗೆ, ಹಾಗೂ ನದಿ ತಟದಲ್ಲಿ ವಾಸಿಸುವ ಮನೆಗಳಿಗೆ ಎಚ್ಚರಿಯನ್ನು ನೀಡಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರೆಡ್ ಅಲಟ್೯ ಘೋಷಿಸಲಾಗಿದೆ.
-
ಡಿವೈಡರ್ ಗೆ ಹತ್ತಿದ ಬಸ್; ವಿದ್ಯುತ್ ಕಂಬಕ್ಕೆ ಢಿಕ್ಕಿ
ಮಂಗಳೂರು: ಖಾಸಗಿ ಬಸ್‌ವೊಂದು ಡಿವೈಡರ್ ಮೇಲೆ ಹತ್ತಿ ಬೀದಿದೀಪದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಮಂಗಳೂರಿನ ಲಾಲ್‌ಬಾಗ್ ಸಮೀಪದ ಐಸ್‌ಕ್ರೀಸ್ ಮಳಿಗೆಯೊಂದರ ಬಳಿ ಭಾನುವಾರ ಸಂಭವಿಸಿದೆ. ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಕರಿಯಪ್ಪ ಭಂಗಿ, ಕೊಡಿಯಾಲ್‌ಬೈಲ್ ನಿವಾಸಿ ಕಿರಣ್, ಶಂಕರ್ ಹಾಗೂ ಶರತ್ ಎಂಬುವವರು ಗಾಯಗೊಂಡಿದ್ದಾರೆ. ತಣ್ಣೀರುಬಾವಿಯಿಂದ ಪಿವಿಎಸ್ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್‌ಗೆ ತೆರಳಬೇಕಿದ್ದ ಖಾಸಗಿ ಬಸ್ ಲಾಲ್‌ಬಾಗ್ ಸಮೀಪದ ಐಸ್‌ಕ್ರೀಸ್ ಮಳಿಗೆಯೊಂದರ ಬಳಿ ರಸ್ತೆಯ ಡಿವೈಡರ್ ಮೇಲೆ ಹತ್ತಿ, ಬೀದಿದೀಪದ ವಿದ್ಯುತ್…