ಮರೆಯಾದ ಪ್ರಾಮಾಣಿಕ ರಾಜಕಾರಣದ ಸಾಕ್ಷಿ ಪ್ರಜ್ಞೆ: ಗೋಪಾಲ ಭಂಡಾರಿ ಅವರಿಗೆ ಉಡುಪಿ Xpress ನುಡಿ ನಮನ

ಅವರ ಕಚೇರಿಯ ಮುಂದೆ ಯಾವುದೋ ದೂರದ ಊರುಗಳಿಂದ ಸಮಸ್ಯೆಗಳ ಅರ್ಜಿಗಳನ್ನು ಹಿಡಿದುಕೊಂಡು ಬರುವ ಸಾಮಾನ್ಯ ಮನುಷ್ಯರು ಯಾವಾಗ ನೋಡಿದರೂ ಇರುತ್ತಿದ್ದರು. ಅವರೆಂದೂ ಆ ಮನುಷ್ಯರನ್ನು ಖಾಲಿ ಕೈಯಲ್ಲಿ ಕಳಿಸಲಿಲ್ಲ. ತಾವು ಕಷ್ಟದಲ್ಲಿದ್ದರೂ ಒಂದಷ್ಟು ಧನ ಸಹಾಯ ಮಾಡಿ ಸಮಾಧಾನ ಹೇಳಿಯೇ ಕಳುಹಿಸುತ್ತಿದ್ದರು. ಮಾಜಿ ಶಾಸಕನಾದರೂ ಅವರ ಕಚೇರಿಯ ಮುಂದೆ ಪಾಪದ ಕೈಗಳು ಸಹಾಯಾಸ್ತ ಬೇಡಿಕೊಂಡು ಬಂದಾಗೆಲ್ಲ ಇವರು ಮಿಡಿಯುತ್ತಿದ್ದರು. ನಿಜ. ಬಡವರ ಕಷ್ಟಗಳಿಗೆ ಮಿಡಿಯುತ್ತಿದ್ದ ಕಾರ್ಕಳದ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ಗುರುವಾರ ನಮ್ಮಿಂದ ಮರೆಯಾಗಿದ್ದಾರೆ. […]