ಯುಗಾದಿಗೆ ಉಸಿರು, ಪ್ರಕೃತಿಯ ಹಸುರು: ಮತ್ತೆ ಬಂತು ಚಿಗುರಿನ ಹಬ್ಬ: ಯುಗಾದಿಯ ವಿಶೇಷ ಬರಹ

ಬರಹ-ಪ್ರಸಾದ ಶೆಣೈ ಮಾರ್ಚ್ ತಿಂಗಳು ಮುಗಿದು ಎಪ್ರಿಲ್ ತಿಂಗಳು ಆರಂಭವಾಗುತ್ತದೋ, ಆಗ ಮರದ ತುಂಬಾ ಚಿಪಿಪಿಲಿ ಹಾಡುಗಳನ್ನು ಹಾಡುತ್ತಲೇ ರೆಂಬೆ ಕೊಂಬೆಗಳಿಗೂ ಹಾರುವ ಹಕ್ಕಿಗಳು ಒಂದೇ ಸಮನೆ ಜಾಸ್ತಿಯಾಗುತ್ತವೆ. ಅವುಗಳೆಲ್ಲಾ “ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ, ಮೋಡಿ ಮಾಡಿ ನನ್ನ ಮನಕೆ ಹರುಷ ತಂದಿದೆ”ಎಂದು ಯಕ್ಷಗಾನದಲ್ಲಿ ಭಾಗವತರು ಸುಶ್ರಾವ್ಯವಾಗಿ ಹಾಡುವ ಪದ್ಯದಂತೆ, ವಸಂತರಾಜನನ್ನು ಕೊಂಡಾಡುತ್ತ, ಬಾ ಬಾ ವಸಂತ ಬಾ ಬಾ ಎಂದು ಹಸಿರ ಬಾಗಿಲೊಳು ನಿಂತು ಕರೆದಂತೆ ಕಾಣಿಸುತ್ತವೆ. ಪುಟ್ಟ ಮರಿಹಕ್ಕಿಗೆ ಒಂದೊಂದೇ […]