ಸಚಿವ ಸ್ಥಾನದ ಆಸೆ ನನಗಿಲ್ಲ :ಶೋಭಾ ಕರಂದ್ಲಾಜೆ

ಉಡುಪಿ: ನಾನು ಸಚಿವ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ಅಲ್ಲ. ರಾಜ್ಯದ ಸಂಸದರ ಪೈಕಿ ನಾನು ಜೂನಿಯರ್‌. ರಾಜ್ಯದಿಂದ  ಹಲವಾರು ಹಿರಿಯ ಸಂಸದರು ಆಯ್ಕೆಯಾಗಿದ್ದಾರೆ. ನಾನು ಸಚಿವಸ್ಥಾನದ ಅಪೇಕ್ಷೆ ಪಡುವುದೂ ಇಲ್ಲ ಎಂದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಉಡುಪಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  ಎಲ್ಲ ಭಾಷೆಯನ್ನು ಕಲಿಯಲು  ಮುಕ್ತ ಅವಕಾಶ ಕಲ್ಪಿಸಬೇಕು. ಹಿಂದಿ ಹೇರಿಕೆಗೆ ಆಕ್ಷೇಪ ಮಾಡುವವರು ರಾಜ್ಯದಲ್ಲಿ  ಕನ್ನಡ ಕಡ್ಡಾಯ ಮಾಡಲಿ ನೋಡೋಣ.  ಕನ್ನಡದ ಬೆಳವಣಿಗೆಗೆ ಆದ್ಯತೆ ನೀಡುವಂತಾಗಲಿ ಎಂದರು. ಕನ್ನಡದ ಬೆಳವಣಿಗೆ ಆಗಿಲ್ಲ: ಸಿದ್ದರಾಮಯ್ಯನವರ ಸರ್ಕಾರದಲ್ಲಿ […]