“ನಾನೂ ಪೋಲಿಸ್ ಅಧಿಕಾರಿ ಆಗೇ ಆಗ್ತೇನೆ”ಎಂದು ಹೊರಟ ಆ ಹಳ್ಳಿ ಹುಡುಗ ಈಗ ಪೊಲೀಸ್ ಹುದ್ದೆಗೆ ರಾಜೀನಾಮೆ ಕೊಟ್ಟೂ ಆಯಿತು..

ತನ್ನ ತಂದೆಯ ಮೇಲೆ ಅದ್ಯಾರೋ ಸುಳ್ಳು ದೂರು ಕೊಟ್ಟು ಆತನಿಗೆ ಪೋಲಿಸರು ಎರ್ರಾಬಿರ್ರಿ ಎಳೆದುಕೊಂಡು ಹೋಗಿ ಅಮಾನವೀಯ ಶಿಕ್ಷೆ ಕೊಟ್ಟು ಯಾವ ದಯೆ ದಾಕ್ಷಿಣ್ಯವೂ ಇಲ್ಲದೇ ಆತನನ್ನು ಮನ ಬಂದಂತೆ ಜಡಿದಾಗ, ಏನೂ ತಪ್ಪನ್ನೇ ಮಾಡದ ತನ್ನ ಅಪ್ಪ ಹೀಗೆಲ್ಲಾ ಜೈಲಿನಲ್ಲಿ ಕೊಳೆಯುತ್ತಿರುವುದನ್ನು ನೋಡಿ ಆ ಹುಡುಗ ಪೂರ್ತಿ ಉರಿದೇ ಹೋದ. ಅವನ ಎಳೆ ಕಣ್ಣುಗಳಲ್ಲಿ ಆ ದಾರುಣ ಚಿತ್ರಗಳು ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿತು. ಪೋಲೀಸ್ ವ್ಯವಸ್ಥೆಯ ಬಗ್ಗೆ ಆಕ್ರೋಶ ಅವನಲ್ಲಿ ಹೆಪ್ಪುಗಟ್ಟುತ್ತಲೇ ಹೋಯಿತು. ಆವತ್ತಿನಿಂದಲೇ ಅವನು  […]