ವಿಕಲಚೇತನ ಅಭಿವೃದ್ದಿ ನಿಧಿಯ ಸಂಪೂರ್ಣ ಬಳಕೆ: ಉಡುಪಿ ಜಿಲ್ಲಾಧಿಕಾರಿ

 ಉಡುಪಿ : ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ, ಸಂಸದರ ಮತ್ತು ಶಾಸಕರ ನಿಧಿಯಲ್ಲಿ ಮೀಸಲಿಟ್ಟಿರುವ ಶೇ.5 ರಷ್ಟು ಅನುದಾನವನ್ನು ಸಂಪೂರ್ಣವಾಗಿ, ವಿಕಲಚೇತರಿಗೆ ಅಗತ್ಯವಿರುವ ವಿವಿಧ ಸೌಲಭ್ಯ ಒದಗಿಸಲು ಬಳಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು ಬುಧವಾರ, ಉಡುಪಿ ರೆಡ್ ಕ್ರಾಸ್ ಭವನದಲ್ಲಿ ನಡೆದ, ವಿಶ್ವ ರೆಡ್ ಕ್ರಾಸ್ ದಿನಾಚರಣೆ ಮತ್ತು ಕೃತಕ ಅವಯವಗಳ ಜೋಡಣಾ ಕೇಂದ್ರ ಉದ್ಘಾಟಿಸಿ, ವಿಕಲಚೇತನರಿಗೆ ಕೃತಕ ಅವಯವ ವಿತರಿಸಿ ಮಾತನಾಡಿದರು. ವಿಶ್ವದಾದ್ಯಂತ ಮಾನವೀಯತೆಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರೆಡ್ […]