ನಾಳೆ (ಸೆ.17)ಉಡುಪಿಯಲ್ಲಿ “ಎಕ್ಸ್ ಫೀನೋ” ಶ್ರೇಷ್ಠತಾ ಕೇಂದ್ರ ಉದ್ಘಾಟನೆ

ಉಡುಪಿ: ತಾಂತ್ರಿಕ ಉದ್ಯೋಗ ನೇಮಕಾತಿ ಸಂಸ್ಥೆ “ಎಕ್ಸ್ ಫೀನೋ” (Xpheno) ಇದರ ರಾಜ್ಯದ ಎರಡನೇ ಹಾಗೂ ಕರಾವಳಿಯ ಪ್ರಪ್ರಥಮ “ಎಕ್ಸ್ ಫೀನೋ ಶ್ರೇಷ್ಠತಾ ಕೇಂದ್ರ” ಉಡುಪಿಯ ಕುಂಜಿಬೆಟ್ಟುವಿನಲ್ಲಿ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭ ನಾಳೆ (ಸೆ.17) ನಡೆಯಲಿದೆ ಎಂದು ಸಹ ಸ್ಥಾಪಕ ಐರೋಡಿ ಕಮಲ್ ಕಾರಂತ್ ಹೇಳಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ-ಮಂಗಳೂರು ಪ್ರದೇಶದ ಪ್ರತಿಭಾವಂತರಿಗೆ ಉದ್ಯೋಗಾವಕಾಶದ ಬಗ್ಗೆ ಮಾರ್ಗದರ್ಶನ ನೀಡಲಿದೆ. ಸಂಸ್ಥೆಯು ಸ್ಥಳೀಯ ಪ್ರತಿಭಾವಂತರನ್ನು ತರಬೇತಿಗೊಳಿಸಿ ಜಾಗತಿಕ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿಕೊಡಲಿದೆ […]