ಉಡುಪಿ: ತೆರಿಗೆ ಪಾವತಿಸದೆ ಸಾರ್ವಜನಿಕ ಸೇವೆಗೆ ಬಳಕೆ; ಖಾಸಗಿ ಬಸ್ ಮುಟ್ಟುಗೋಲು

ಉಡುಪಿ: ವಾಹನ ತೆರಿಗೆ ಪಾವತಿಸದೆ, ಅಧ್ಯರ್ಪಣದಿಂದ ಬಿಡುಗಡೆಗೊಳಿಸಿಕೊಳ್ಳದೆ ಜೂನ್ 28ರಂದು ಉಡುಪಿಯಿಂದ ಹೆಬ್ರಿ ಕಡೆಗೆ ಖಾಸಗಿ ಕಂಪನಿಯ ನೌಕರರನ್ನು ಸಾರ್ವಜನಿಕ ರಸ್ತೆಯ ಮೇಲೆ ಕೊಂಡೊಯ್ಯುತ್ತಿದ್ದ KA51-B9646 ನೋಂದಣಿ ಸಂಖ್ಯೆಯ ಎಸ್ ವಿಟಿ ಖಾಸಗಿ ಬಸ್ ಅನ್ನು ಆರ್ ಟಿಒ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆರ್ ಟಿಒ ಕಾನೂನು ಉಲ್ಲಂಘಿಸಿ ಬಸ್ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಪಾಸಣೆ ನಡೆಸಿದ ಅಧಿಕಾರಿಗಳು ಸದರಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು, ವಾಹನದಲ್ಲಿದ್ದ ಪ್ರಯಾಣಿಕರನ್ನು ಅವರವರ ನಿವಾಸಕ್ಕೆ ಬಿಟ್ಟು ತದನಂತರ […]