ಉಡುಪಿ ಉನ್ನತಿ ಕ್ಯಾರಿಯರ್ ಅಕಾಡೆಮಿ: ಉದ್ಯೋಗ ತರಬೇತಿಯ ಪ್ರಮಾಣಪತ್ರ ಪ್ರದಾನ ಕಾರ್ಯಕ್ರಮ

ಉಡುಪಿ: ಉದ್ಯೋಗಾಧಾರಿತ ತರಬೇತಿಗಳಿಗೆ ಈಗಾಗಲೇ ಸುಪ್ರಸಿದ್ಧವಾಗಿರುವ ಉಡುಪಿಯ ಉನ್ನತಿ ಕ್ಯಾರಿಯರ್ ಅಕಾಡೆಮಿಯಲ್ಲಿ “ಇಂಟರ್ನ್ಷಿಪ್ ನಿಂದ ಉದ್ಯೋಗ ತರಬೇತಿ (IEP)ಯ ಪ್ರಮಾಣಪತ್ರ ಪ್ರದಾನ ಕಾರ್ಯಕ್ರಮ ಹಾಗೂ “ಉದ್ಯೋಗದಾತರೊಂದಿಗೆ ಸಂವಾದ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಟ್ರೆಸ್ಕಾನ್ ಗ್ಲೋಬಲ್ ಸೊಲ್ಯೂಷನ್ಸ್ ನ ಜನರಲ್ ಮ್ಯಾನೇಜರ್ ಎಡ್ವರ್ಡ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೆರೆದಿದ್ದ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಸಂದರ್ಶನ ಎದುರಿಸುವ ಬಗ್ಗೆ ಹಾಗೂ ತಮ್ಮ ಭವಿಷ್ಯ ರೂಪಿಸಲು ಬೇಕಾಗುವ ವಿವಿಧ ಕೌಶಲ್ಯಗಳ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ […]