ಅ.2 ರಂದು ಉಚ್ಚಿಲ ದಸರಾ ಶೋಭಾಯಾತ್ರೆ; ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ: ಉಡುಪಿ – ಉಚ್ಚಿಲ ದಸರಾ 2025ರ ಪ್ರಯುಕ್ತ ಬೃಹತ್ ಶೋಭಾಯತ್ರೆ ಮೆರವಣಿಗೆಯು ಅ. 2ರಂದು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗಲಿರುವುದರಿಂದ ವಾಹನ ದಟ್ಟಣೆ ಆಗುವ ಸಾಧ್ಯತೆ ಇರುವುದರಿಂದ ಉಡುಪಿ- ಮಂಗಳೂರು ಮಾರ್ಗವಾಗಿ ಸಂಚರಿಸುವ ಘನ ವಾಹನಗಳನ್ನು ಅಂದು ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬದಲಿ ಮಾರ್ಗವಾಗಿ ಕಟಪಾಡಿ -ಶಿರ್ವ-ಬೆಲ್ಮಣ್-ಪಡುಬಿದ್ರಿ ಮಾರ್ಗವಾಗಿ ಸಂಚರಿಸಲು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ. ಪರ್ಯಾಯ ಮಾರ್ಗ ಉಡುಪಿ ಕಡೆಯಿಂದ ಬಜೆ ಏರ್ ಪೋರ್ಟ್ ಹೋಗುವ ವಾಹನಗಳು ಕಟಪಾಡಿ- ಶಿರ್ವ-ಬೆಮ್ಮಣ್ -ಮುಂಡೂರು […]