ಉಡುಪಿ: ಎರಡು ಪ್ರತ್ಯೇಕ ಪ್ರಕರಣ; ಕಾರಿನ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕಳವು

ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕಳವು ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಕೊರಂಗ್ರಪಾಡಿ ನಿವಾಸಿ ರಕ್ಷಾ ಯು ಎಂಬವರು ಮಾ. 11ರಂದು ಉಡುಪಿ ಸಿಟಿ ಬಸ್ ನಿಲ್ದಾಣದ ರಾಜ್ ಟವರ್ಸ್ ಸಮೀಪ ಉಡುಪಿ- ಮಣಿಪಾಲ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸುಜುಕಿ ಸ್ಟೀಫ್ ಕಾರಿನ ಹಿಂಭಾಗದ ಎಡಬದಿಯ ಗ್ಲಾಸ್ ಅನ್ನು ಒಡೆದು ಹಿಂಬದಿಯ ಸೀಟಿನಲ್ಲಿದ್ದ ಎಸರ್ ಕಂಪೆನಿಯ ಲ್ಯಾಪ್ ಟಾಪ್ ಕಳವು ಮಾಡಿದ್ದಾರೆ. ಲ್ಯಾಪ್ […]