ಉಡುಪಿ: ನಗರದ ಪ್ರಮುಖ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಕಾರ್ಯಾರಂಭ: ಎಸ್ಪಿ ಹರಿರಾಮ್ ಶಂಕರ್ ಪರಿಶೀಲನೆ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠವನ್ನು ಸಂಪರ್ಕ ಮಾಡುವ ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಕಿರಿಕಿರಿ ಮಿತಿಮೀರಿದೆ. ಉಡುಪಿಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ರೋಡ್ ಬ್ಲಾಕ್ ಸಾಮಾನ್ಯವಾಗಿದೆ. ಉಡುಪಿ ನಗರಕ್ಕೆ ಸಮರ್ಪಕವಾದ ಟ್ರಾಫಿಕ್ ಸಿಗ್ನಲ್ ಇನ್ನು ಕೂಡ ವ್ಯವಸ್ಥೆ ಆಗಿಲ್ಲ. ಜನರ ಬಹುಕಾಲದ ಬೇಡಿಕೆಯನ್ನು ಗಮನಿಸಿ, ಜಿಲ್ಲಾ ಪೊಲೀಸ್ ಇಲಾಖೆಯ ಸಲಹೆ ಪಡೆದು ಇದೀಗ ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಇದರಿಂದ ಕೃಷ್ಣ ಮಠಕ್ಕೆ ಹೋಗುವ ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯ ಸವಾರರಿಗೂ […]