ಕಂಚಿನಡ್ಕ ಟೋಲ್ ಸಂಗ್ರಹ ಆದೇಶ ರದ್ದುಗೊಳಿಸದಿದ್ದರೆ ಉಗ್ರ ಹೋರಾಟ: ಕ.ರ.ವೇ. ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಕೆ

ಕಾಪು: ಹಲವು ವಿಫಲ ಪ್ರಯತ್ನಗಳ ಬಳಿಕ ಇದೀಗ ಮತ್ತೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಪಡುಬಿದ್ರಿಯ ಕಂಚಿನಡ್ಕ ಬಳಿ ಟೋಲ್ ಸಂಗ್ರಹಕ್ಕೆ ಆದೇಶ ನೀಡಿದ ಬಗ್ಗೆ ತಿಳಿದುಬಂದಿದ್ದು, ಜನವಿರೋಧಿ ಅದೇಶವನ್ನು 10 ದಿನದೊಳಗೆ ರದ್ದುಪಡಿಸದಿದ್ದರೆ ವಿವಿಧ ಸಂಘಟನೆಗಳ ಜತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಸಿದ್ದಾರೆ. ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಕ.ರ.ವೇ.(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅನ್ಸಾರ್ ಅಹಮದ್ ಮಾತನಾಡಿ ಪಡುಬಿದ್ರಿ-ಕಾರ್ಕಳ ರಾಜ್ಯ […]