ಉಡುಪಿ: ಟೀಮ್ ನೆಷನ್ ಫಸ್ಟ್(ರಿ) ವತಿಯಿಂದ ರಕ್ತದಾನ ಶಿಬಿರ.

ಉಡುಪಿ: ಟೀಮ್ ನೆಷನ್ ಫಸ್ಟ್(ರಿ) ಇದರ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವು ಅಜ್ಜರಕಾಡಿನ ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿಯಾಗಿ ಆಗಸ್ಟ 3ರಂದು ನಡೆಯಿತು. ಉಡುಪಿಯ ಶಾಸಕರಾದ ಯಶಪಾಲ್ ಎ ಸುವರ್ಣ ರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಟೀಮ್ ನೇಷನ್ ಫಸ್ಟ್ ನ ಅಧ್ಯಕ್ಷರಾದ ಸೂರಜ್ ಕಿದಿಯೂರ್ ಮಾತನಾಡಿ ರಕ್ತದಾನ ಮಹಾದಾನ, ಚಿಕಿತ್ಸೆಯ ಮೂಲಕ ವೈದ್ಯರು ರೋಗಿಯನ್ನು ಗುಣಪಡಿಸಬಹುದು ಆದರೆ ಒಬ್ಬ ಸಾಮಾನ್ಯ ಮನುಷ್ಯ ರಕ್ತದಾನದ ಮೂಲಕ ಒಬ್ಬರ ಜೀವವನ್ನು ಉಳಿಸಬಹುದು […]