ಹೆಜಮಾಡಿ ಮಹಾಲಿಂಗೇಶ್ವರನಿಗೆ ಪುತ್ತಿಗೆ ಶ್ರೀಪಾದರಿಂದ ಸ್ವರ್ಣ ಅಟ್ಟೆ ಪ್ರಭಾವಳಿ ಅರ್ಪಣೆ

ಉಡುಪಿ: ಪಡುಬಿದ್ರಿ ಸಮೀಪದ ಹೆಜಮಾಡಿ ಗ್ರಾಮದ ಆರಾಧ್ಯ ದೈವವಾದ ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಮೂರ್ತಿಗೆ ಉಡುಪಿ ಶ್ರೀ ಕೃಷ್ಣ ಮಠದ ವಿಶ್ವಗೀತಾ ಪರ್ಯಾಯೋತ್ಸವದ ಸ್ಮರಣಾರ್ಥವಾಗಿ ಭಕ್ತಿಪೂರ್ವಕವಾಗಿ ಸ್ವರ್ಣ ಅಟ್ಟೆ ಹಾಗೂ ಪ್ರಭಾವಳಿಯನ್ನು ಸಮರ್ಪಿಸಲಾಯಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಭಗವದ್ಭಕ್ತರ ಸಹಕಾರದಿಂದ ಈ ಸ್ವರ್ಣಖಚಿತ ಅಟ್ಟೆ–ಪ್ರಭಾವಳಿಯನ್ನು ದೇಣಿಗೆಯಾಗಿ ನೀಡಲಾಗಿದ್ದು, ಈ ಸಂಬಂಧ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಅಶ್ವತ್ಥ ಕಟ್ಟೆಯಿಂದ ಆರಂಭವಾದ ಭವ್ಯ ಮೆರವಣಿಗೆ ಗ್ರಾಮ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ […]