ಉಡುಪಿ: ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದೊಂದಿಗೆ ಮಂಗಳೂರು ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಆ್ಯಂಡ್ ಡೆವಲಪ್‌ಮೆಂಟ್ ಜತೆ ಒಡಂಬಡಿಕೆ.

ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗವು ಮಂಗಳೂರಿನ ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆಯೊಂದಿಗೆ ದಿನಾಂಕ 22 ಪೆಬ್ರವರಿ 2025 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಒಡಂಬಡಿಕೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಕೌಶಲ್ಯ ತರಬೇತಿ ನೀಡುವುದಾಗಿದೆ. ಎರಡೂ ಸಂಸ್ಥೆಗಳು ಇಂದಿನ ಕ್ರಿಯಾತ್ಮಕ ವ್ಯಾಪಾರ ಪರಿಸರದ ಸಾಮಾಜಿಕ ಅಗತ್ಯಗಳಿಗೆ ಹೊಂದಿಕೆಯಾಗುವ ಪರಿವರ್ತಿತ ಕಲಿಕೆಯ ಅನುಭವಗಳನ್ನು ಅಭಿವೃದ್ಧಿಪಡಿಸಲು ತಮ್ಮ ಬದ್ಧತೆಯನ್ನು ತಿಳಿಸುವ ಉದ್ದೇಶದಿಂದ ಈ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. […]