ಉಡುಪಿ: ದಿವ್ಯಾಂಗರಿಗಾಗಿ ವಿಶೇಷ ಕುರ್ಚಿ ರೂಪುಗೊಳಿಸಿದ ವಿದ್ಯಾರ್ಥಿನಿ; ಭಾರೀ ಮೆಚ್ಚುಗೆ

ಉಡುಪಿ: ಕಾವಡಿ ಫ್ರೌಡಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಸಂಜನಾ, ದಿವ್ಯಾಂಗ ಮತ್ತು ಅಶಕ್ತರಿಗಾಗಿ ಕುರ್ಚಿಯೊಂದನ್ನು ರೂಪಿಸಿದ್ದು ಎಲ್ಲರ ಗಮನ ಸೆಳೆದಿದೆ. ಈಕೆಯ ಮನೆಯಲ್ಲಿ ತೀರ ಬಡತನ ಇದೆ. ತಂದೆ ಆರ್ಮುಗಂ,ಕೂಲಿ ಕೆಲಸ ಮಾಡಿದರೆ ,ತಾಯಿ ಜಯಲಕ್ಷ್ಮೀ ಗೃಹಿಣಿ. ಕಾಲು ನೆಲಕ್ಕೆ ಊರಲಾಗದವರಿಗೆ ನಡೆದಾಡುವುದು ಕೂಡ ಕಷ್ಟ. ಇನ್ನು ದಿವ್ಯಾಂಗರಿಗೆ ಶೌಚಸಹಿತ ನಿತ್ಯ ಜೀವನವನ್ನು ನಿರ್ವಹಿಸುವುದು ಕಷ್ಟ.ಇಂಥವರಿಗಾಗಿಯೇ ಸಂಜನಾ ಸ್ವಂತ ಪರಿಶ್ರಮದಿಂದ ಕುರ್ಚಿಯೊಂದನ್ನು ತಯಾರಿಸಿದ್ದಾರೆ. ಈ ಕುರ್ಚಿಯನ್ನು ನಿರ್ಮಿಸಲು ಈಕೆಗೆ ನಾಲ್ಕು ಸಾವಿರ ಖರ್ಚು ತಗಲಿದೆಯಂತೆ. ಕುರ್ಚಿಯಲ್ಲಿ ಬೆನ್ನಿಗೆ […]