ಪುನರೂರು ವಿಶ್ವನಾಥ ಕ್ಷೇತ್ರದಲ್ಲಿ ಶಿರೂರು ಶ್ರೀಪಾದರ ಆರಾಧನೆ

ಉಡುಪಿ: ನಿರಂತರ 48 ವರ್ಷಗಳ ಕಾಲ ಉಡುಪಿ ಕೃಷ್ಣ ದೇವರಿಗೆ ಪೂಜೆ ಸಲ್ಲಿಸಿ, ಮೂರು ಪರ್ಯಾಯಗಳನ್ನು ಯಶಸ್ವಿಯಾಗಿ ನಡೆಸಿದ ಶ್ರೀಶಿರೂರು ಮಠದ ಕೀರ್ತಿಶೇಷ  ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 2ನೇ ವರ್ಷದ ಆರಾಧನೆಯು ಪುನರೂರು ವಿಶ್ವನಾಥ ಕ್ಷೇತ್ರದಲ್ಲಿ ಜರಗಿತು. ಶಿರೂರು ಶ್ರೀಪಾದರ ಪೂರ್ವಾಶ್ರಮದ ಮೂಲ ದೇವತಾ ಸನ್ನಿಧಾನವಾದ ಪುನರೂರು ಕ್ಷೇತ್ರದಲ್ಲಿ ಕುಟುಂಬಿಕರ ಉಪಸ್ಥಿತಿಯಲ್ಲಿ ಶ್ರೀವಿಶ್ವನಾಥ ದೇವರಿಗೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಗುರುಮೂರ್ತಿ ಆವರು ಮಹಾಪೂಜೆ ಸಹಿತ ಏಕಾದಶ ರುದ್ರಾಭಿಷೇಕ, ಹಾಗೂ ವಿದ್ವಾಂಸರಾದ ಕಡಂದಲೆ ಅನಂತ ಕೃಷ್ಣಾಚಾರ್ಯಾರು ಪವಮಾನ ಹೋಮ […]