ಶೀರೂರು ಪರ್ಯಾಯ ಭಕ್ತರ ಪರ್ಯಾಯ: ಡಾ.ಸರಳತ್ತಾಯ

ಉಡುಪಿ: ಭಗವಾನ್ ಕೃಷ್ಣ ಎಲ್ಲರ ಮನೆ ಮನದ ಮಗು. ಎಲ್ಲರಿಗೂ ಆಪ್ತ. ಆತನಿಗೆ ಸಮರ್ಪಿಸುವ ಎಲ್ಲಾ ಕಾಣಿಕೆ ಎಲ್ಲೂ ಹೋಗದೆ ಮನೆಯ ಮಗುವಿನ ಏಳ್ಗೆಗೆ ಕಾರಣವಾಗುತ್ತದೆ. ಹೊರೆಕಾಣಿಕೆಯೂ ಇದಕ್ಕೆ ಹೊರತಾಗಿಲ್ಲ. ಶೀರೂರು ಪರ್ಯಾಯ ಅದು ಭಕ್ತರ ಪರ್ಯಾಯ ಎಂದು ಭಾವೀ ಪರ್ಯಾಯ ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ಹೇಳಿದರು. ಅವರು ಪರ್ಯಾಯ ಪೂರ್ವಬಾವೀ ಹೊರಕಾಣಿಕೆ-ಸಾಂಸ್ಕೃತಿಕ ಹಾಗೂ ಪ್ರಚಾರ ಕುರಿತಾದ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತಾಡಿದರು.ಉಡುಪಿಯ ಕೃಷ್ಣನದ್ದು ಬಾಲರೂಪ. ಶೀರೂರು ಮಠಾಧೀಶರು ಅದೇ ವಯೋಮಾನದವರು. ಶೀರೂರು ಮಠವೆಂದರೆ ಹಿಂದಿನಿಂದಲೂ […]