ಮಾ.6ರಂದು ಶೀರೂರು ಮಠದ ಪರ್ಯಾಯ ಅಕ್ಕಿ ಮುಹೂರ್ತ

ಉಡುಪಿ: 2026ರ ಜ.18ರಂದು ನಡೆಯಲಿರುವ ಶೀರೂರು ಮಠದ ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಎರಡನೇಯದಾದ ಅಕ್ಕಿ ಮುಹೂರ್ತ ಇದೇ ಮಾ.6ರ ಬೆಳಗ್ಗೆ 11:10ಕ್ಕೆ ಶೀರೂರು ಮಠದಲ್ಲಿ ನಡೆಯಲಿದೆ ಎಂದು ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯದ ಎರಡು ವರ್ಷಗಳ ಅವಧಿಗೆ (2026ರ ಜ.18ರಿಂದ 2028ರ ಜ.17ರವರೆಗೆ) ಅನ್ನದಾನಕ್ಕೆ ಅಗತ್ಯವಿರುವ ಅಕ್ಕಿ ಸಂಗ್ರಹಕ್ಕಾಗಿ ಅಕ್ಕಿ ಮುಹೂರ್ತ ನಡೆಯುವುದು ಉಡುಪಿ ಅಷ್ಟಮಠಗಳ ಪರ್ಯಾಯದಲ್ಲಿ ನಡೆದುಕೊಂಡ ಬಂದ ಸಂಪ್ರದಾಯ ಎಂದರು. ಶೀರೂರು […]