ಶೀರೂರು ಮಠದ ಪರ್ಯಾಯ: ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ

ಉಡುಪಿ: ಭಾವಿ ಪರ್ಯಾಯ ಶೀರೂರು ಪರ್ಯಾಯ 2026-28ರ ಅಂಗವಾಗಿ ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರು ನಡೆಸಲಿರುವ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ ಅಕ್ಕಿ ಮುಹೂರ್ತ ಗುರುವಾರ ಉಡುಪಿ ಶೀರೂರು ಮಠದ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಬೆಳಗ್ಗೆ 9ಕ್ಕೆ ದೇವತಾ ಪ್ರಾರ್ಥನೆ-ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ, ಬಳಿಕ ಚಿನ್ನದ ಪಲ್ಲಕ್ಕಿ ಹಾಗೂ ಅಕ್ಕಿಮುಡಿಯನ್ನು ನೂರಾರು ಮಂದಿ ಭಕ್ತಾದಿಗಳು ಅಕ್ಕಿಮುಡಿಯನ್ನು ತಲೆಯ ಮೇಲೆ ಹೊತ್ತು ರಥಬೀದಿಯಲ್ಲಿ ಶ್ರೀಮುಡಿ ಮೆರವಣಿಗೆ ನಡೆಸಿ ಶ್ರೀಮಠಕ್ಕೆ ತರಲಾಯಿತು. ಆ ಬಳಿಕ […]