ಉಡುಪಿ: ಕುಡುಬಿ ಸಮುದಾಯದಿಂದ ಹೋಳಿ ಆಚರಣೆ

ಉಡುಪಿ: ಮೂಡುಗುಡ್ಡೆ ಕುಡುಬಿ ಸಮುದಾಯದಿಂದ ನಗರದಲ್ಲಿ ಇಂದು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯೇ ಕೂಡುಕಟ್ಟಿನ ಎಲ್ಲಾ ಸದ್ಯಸರು ವೇಷ ಭೂಷಣ, ಗೆಜ್ಜೆ, ಗುಮ್ಮಟೆಯೊಂದಿಗೆ ಸುಮಾರು 75 ಜನ ಗುರಿಕಾರರ ಮನೆಗೆ ಬಂದು ಸೇರಿದ್ದರು. ಗುರಿಕಾರರ ಮನೆಯಲ್ಲಿ ಪ್ರತಿಷ್ಠೆ, ಹಾಡುಗಳನ್ನು ಹಾಡಿ, ಹೋಳಿ ಹಬ್ಬದ ಸಂಪ್ರದಾಯದಂತೆ ಕೋಲಾಟ, ಗುಮ್ಮಾಟೆ ನರ್ತನವನ್ನು ಮಾಡಿ, ಹೊರ ಗ್ರಾಮಕ್ಕೆ ಹೋಗಲು ಚಾಲನೆಯನ್ನು ನೀಡಲಾಯಿತು. ಅದರಂತೆ 5 ದಿನಗಳ ನಡೆಯುವ ಈ ಹೋಳಿ ಹಬ್ಬ ಆಚರಣೆಯ ಸದ್ಯಸರು ಗ್ರಾಮದಲ್ಲಿ ತಿರುಗಾಟ ಮಾಡಿ ಮಾ.18ರಂದು […]