ಉಡುಪಿ: ಹಿರಿಯ ಸಾಹಿತಿ ಡಾ. ಉಪ್ಪಂಗಳ ರಾಮಭಟ್ ಇನ್ನಿಲ್ಲ

ಉಡುಪಿ: ಕನ್ನಡದ ಹಿರಿಯ ಸಾಹಿತಿ, ವಿದ್ವಾಂಸ ಡಾ. ಉಪ್ಪಂಗಳ ರಾಮಭಟ್ (81) ಅವರು ಇಂದು ನಿಧನ ಹೊಂದಿದರು. ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು ಕಳೆದ ನಾಲೈದು ದಶಕಗಳಿಂದ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸಂಶೋಧನೆ, ವಿಮರ್ಶೆ, ಮುಕ್ತಕ ಕವನ ರಚನೆ, ಪ್ರವಾಸ, ನಾಟಕ, ಜೀವನ ಚಿತ್ರಣ, ಅನುವಾದ, ವರ್ತಮಾನ ಸಾಮಾಜಿಕ ಸಮಸ್ಯೆಗಳು ಮೊದಲಾದ ವಿಚಾರಗಳಲ್ಲಿ ಲೇಖನ, ಕೃತಿ ರಚನೆ ಮಾಡಿದ್ದಾರೆ. ಕನ್ನಡ ವ್ಯಾಕರಣ, ಗಡಿನಾಡು ತುಳುನಾಡಿನ ಕುರಿತಾದ ಅವರ ಮೌಲಿಕ ಸಂಶೋಧನೆಗಳು ವಿದ್ವಾಂಸರ […]