ಉಡುಪಿ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ; ರಕ್ತ ಪರೀಕ್ಷಾ ಕೇಂದ್ರ ಉದ್ಘಾಟನೆ

ಉಡುಪಿ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಂಬಲಪಾಡಿ ಎನ್‌ಎಚ್ 66 ಸಮೀಪದಲ್ಲಿರುವ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ನೂತನವಾಗಿ ಆರಂಭಗೊಂಡ ರಕ್ತ ಪರೀಕ್ಷಾ ಕೇಂದ್ರ ’ಸವಿತಾ ಡಯಾಗ್ನೋಸ್ಟಿಕ್ ಸೆಂಟರ್’ (ಕ್ಲಿನಿಕಲ್ ಲ್ಯಾಬೋರೇಟರಿ)ಯನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಾತಿ ಸಂಘಟನೆ ಗಟ್ಟಿ ಗೊಳಿಸುವುದರ ಜತೆಗೆ ಹಿಂದೂ ಸಮಾಜ ಸದೃಢಗೊಳಿಸುವುದು ಇಂದಿನ ಅಗತ್ಯ. ಸವಿತಾ ಸಮಾಜ ಸಣ್ಣ ಸಮುದಾಯವಾಗಿದ್ದರೂ ಸಮಾಜ ಹಾಗೂ ದೇಶಕ್ಕೆೆ ತನ್ನದೆ […]