“ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಗೆ ಶ್ರೀಮತಿ ಮಾಯಾ ಕಾಮತ್ ಆಯ್ಕೆ.

ಮಣಿಪಾಲ:ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಟಾನದ ವತಿಯಿಂದ ಕನ್ನಡ ನಿತ್ಯೋತ್ಸವದ ಪ್ರಯುಕ್ತ “ಸರಸ್ವತಿ ಸಾಧಕ ಸಿರಿ ” ರಾಷ್ಟ್ರ ಪ್ರಶಸ್ತಿ ಗೆ ಶ್ರೀಮತಿ ಮಾಯಾ ಕಾಮತ್ ಈಶ್ವರನಗರ ಮಣಿಪಾಲ, ಉಡುಪಿ ಜಿಲ್ಲೆ ಇವರು ಆಯ್ಕೆಯಾಗಿದ್ದಾರೆ. ಏಪ್ರಿಲ್ 27ರಂದು ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣಮಂಟಪ, ದಾವಣಗೆರೆಯಲ್ಲಿ ಪ್ರಧಾನ ಸಮಾರಂಭ ಜರಗಲಿದೆ ಎಂದು ಪ್ರತಿಷ್ಟಾನದ ಅಧ್ಯಕ್ಷ ಡಾ. ನಾಗೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.