ಲಾಕ್ ಡೌನ್ ಹಿನ್ನಲೆ: ಸಂತೆಕಟ್ಟೆಯ ವಾರದ ಸಂತೆ ರದ್ದು
ಉಡುಪಿ, ಮೇ 1: ಉಡುಪಿ ನಗರಸಭಾ ವ್ಯಾಪ್ತಿಯ ಪುತ್ತೂರು (ಕಲ್ಯಾಣಪುರ) ಸಂತೆಕಟ್ಟೆಯಲ್ಲಿ ಪ್ರತಿ ಭಾನುವಾರ ನಡೆಯುವ ವಾರದ ಸಂತೆಯನ್ನು, ಕೋವಿಡ್-19 ಕರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಮುಗಿಯುವರೆಗೂ ರದ್ದುಗೊಳಿಸಲಾಗಿದೆ ಎಂದು ಉಡುಪಿ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.