ಉಡುಪಿ: ಗಣರಾಜ್ಯೋತ್ಸವ ದಿನಾಚರಣೆ; ಸಚಿವ ಎಸ್. ಅಂಗಾರರಿಂದ ಧ್ವಜಾರೋಹಣ

ಉಡುಪಿ: ಜಿಲ್ಲೆಯ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 72ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವರು, ಗೌರವ ವಂದನೆ ಸ್ವೀಕರಿಸಿದರು. ಆ ನಂತರ ಕರಾವಳಿ ಕಾವಲು ಪೊಲೀಸ್, ಅಗ್ನಿಶಾಮಕ ದಳ, ಸಶಸ್ತ್ರ ಪೊಲೀಸ್ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳ ಎನ್.ಸಿ.ಸಿ. ಮತ್ತು ರೆಡ್ ಕ್ರಾಸ್ ತಂಡಗಳ ಪಥ ಸಂಚಲನ ವೀಕ್ಷಿಸಿದರು. ಶಾಸಕ ಕೆ. ರಘುಪತಿ ಭಟ್, ಜಿ.ಪಂ. […]