ಉಡುಪಿ:ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ “ಉಡುಪಿ ಶ್ರೀ ಕೃಷ್ಣ ರೈಲ್ವೆ ನಿಲ್ದಾಣ” ಎಂದು ಮರುನಾಮಕರಣ

ಉಡುಪಿ : ಜಿಲ್ಲೆಯ ಪ್ರಮುಖ ರೈಲ್ವೆ ನಿಲ್ದಾಣವಾಗಿರುವ ಇಂದ್ರಾಳಿ ರೈಲ್ವೆ ನಿಲ್ದಾಣ ಇದೀಗ ಹೊಸ ರೂಪದಲ್ಲಿ ಪರಿಚಿತವಾಗಲಿದೆ. ರೈಲ್ವೆ ಇಲಾಖೆ ಅಧಿಕೃತವಾಗಿ ಈ ನಿಲ್ದಾಣವನ್ನು “ಉಡುಪಿ ಶ್ರೀ ಕೃಷ್ಣ” ಎಂದು ಮರುನಾಮಕರಣ ಮಾಡಿದೆ. ಮಂಗಳೂರಿನಿಂದ ಕಾಸರಗೋಡು, ಗೋವಾ, ಮುಂಬೈ, ಬೆಂಗಳೂರು ಮುಂತಾದ ಕಡೆಗಳಿಗೆ ಸಂಚಾರ ಮಾಡುವ ಅನೇಕ ರೈಲುಗಳು ತಂಗುವ ಈ ನಿಲ್ದಾಣಕ್ಕೆ ಉಡುಪಿ ಶ್ರೀಕೃಷ್ಣನ ಹೆಸರನ್ನು ಇಡುವ ಮೂಲಕ ನಗರದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಗುರುತನ್ನು ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ತಲುಪಿಸಲು ಸಹಾಯವಾಗಲಿದೆ ಎಂದು ಅಧಿಕಾರಿಗಳು […]