ಉಡುಪಿ: ರಾಮ್ ಅಡ್ವಟೈಸರ್ಸ್ ಮಾಲಕ ರಾಮಚಂದ್ರ ಆಚಾರ್ಯ ನಿಧನ.

ಉಡುಪಿ: ನಗರದ ರಾಮ್ ಅಡ್ವರ್ಟೈಸರ್ಸ್ ಮಾಲಕ ರಾಮಚಂದ್ರ ಆಚಾರ್ಯ (66) ಮೇ.22ರಂದು ನಿಧನರಾದರು. ಮೃತರು ಪತ್ನಿ ಪುತ್ರಿಯನ್ನು ಅಗಲಿದ್ದಾರೆ. 25 ವರ್ಷಗಳಿಂದ ಜಾಹೀರಾತು ಏಜೆನ್ಸಿ ನಡೆಸಿಕೊಂಡು ಬಂದಿದ್ದ ಅವರು ಉಡುಪಿಯ ರೈಲ್ವೇ ಯಾತ್ರಿ ಸಂಘದ ಖಜಾಂಚಿಯಾಗಿ ಕೆಲಸ ನಿರ್ವಹಿಸಿ, ಉಡುಪಿಗೆ ಹೆಚ್ಚಿನ ರೈಲ್ವೇ ಸೌಕರ್ಯಕ್ಕಾಗಿ ಹೋರಾಟ ನಡೆಸಿದ್ದರು. ಕಿನ್ನಿಮೂಲ್ಕಿ ವೀರಭದ್ರ ದೇವಾಲಯದ ಸಹಾಯಕ ಅರ್ಚಕರಾಗಿಯೂ ಕೆಲಸ ನಿರ್ವಹಿಸಿದ್ದರು. ಉಡುಪಿ ಜನಸಂಘದ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಕಿನ್ನಿಮೂಲ್ಕಿ ವಾರ್ಡ್‌ನ ಬೂತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.