ಉಡುಪಿ:ಪ್ರಥಮ ಪಿಯು ವಿದ್ಯಾರಂಭ – ಭವ್ಯ ಭಾರತದ ಸುಪ್ರಜೆಯಾಗಬೇಕು-ಡಾ|ಎ.ಪಿ.ಭಟ್

ಉಡುಪಿ:’ಶಿಕ್ಷಣದ ಜೊತೆಗೆ ಸಂಸ್ಕಾರ ಪಡೆದು ಭವ್ಯ ಭಾರತದ ಸುಪ್ರಜೆಯಾಗಬೇಕು. ಶ್ರದ್ಧೆ, ಅನವರತ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ. ಸ್ವಯಂ ಶಿಸ್ತನ್ನು ಅಳವಡಿಸಿಕೊಂಡಾಗ ಶೈಕ್ಷಣಿಕ ಸಾಧನೆ ಸಾಧ್ಯ. ಪೋಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಮನೆಯಲ್ಲಿ ಮಾಡಿದರೆ, ವಿದ್ಯಾ ಸಂಸ್ಥೆಯಲ್ಲಿ ಅಧ್ಯಾಪಕರು ಸಂಸ್ಕಾರಯುತ ಶಿಕ್ಷಣ ನೀಡುತ್ತಾರೆ’ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಗೌರವ ಮಹಾ ಕಾರ್ಯದರ್ಶಿ ಡಾ|ಎ.ಪಿ.ಭಟ್ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರಂಭದ ಉದ್ಘಾಟನೆ ಹಾಗೂ ಪೂರ್ವ ಮಾಹಿತಿ […]