ಪರ್ಯಾಯೋತ್ಸವ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಹಾಗೂ ಫೋಟೋ ಕಾಡ್ತಾ ಸಂಸ್ಥೆಯ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಇತ್ತೀಚೆಗೆ ಜಗನ್ನಾಥ ಸಭಾಭವನದಲ್ಲಿ ನಡೆಯಿತು. ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಸಹಾಯಕ ಮಹಾಪ್ರಬಂಧಕ ಪ್ರವೀಣ್ ಕೊರಂಗ್ರಪಾಡಿ ಬಹುಮಾನ ವಿತರಿಸಿ ಮಾತನಾಡುತ್ತಾ ಯಾವುದೇ ಕಾರಣವಿಲ್ಲದೆ ಮುಖದಲ್ಲಿ ನಗುವನ್ನು ತರಿಸಲು ಒಬ್ಬ ಛಾಯಾಗ್ರಹಕನಿಗೆ ಮಾತ್ರ ಸಾಧ್ಯ ಯಾವುದೇ ಸಮಾರಂಭಗಳಲ್ಲಿ ಛಾಯಾಗ್ರಹಕರು ನಮ್ಮ ಮುಖದಲ್ಲಿ ನಗುವನ್ನು ತರಿಸಿ ಛಾಯಾಚಿತ್ರವನ್ನು ಕ್ಲಿಕ್ಕಿಸುತ್ತಾರೆ. ಇಂತಹ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ […]