ಅದಮಾರು ಪರ್ಯಾಯದ ಮೊದಲ ಅನ್ನಪ್ರಸಾದ; ಶನಿವಾರ 20-25 ಸಾವಿರ ಮಂದಿಗೆ ಬೊಂಬಾಟ್ ಭೋಜನ

ಉಡುಪಿ: ಅದಮಾರು ಮಠ ಪರ್ಯಾಯದ ಮೊದಲ ಅನ್ನಪ್ರಸಾದ ವಿತರಣೆ ಕಾರ್ಯ ಶನಿವಾರ ಮಹಾಪೂಜೆಯ ಬಳಿಕ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿಶೇಷ ಹಾಲುಪಾಯಸದ ಸವಿಯನ್ನುಂಡರು. ರಾಜಾಂಗಣ ಸಮೀಪದ ಬೈಲಕೆರೆಯ ವಿಶಾಲ ಜಾಗದಲ್ಲಿ ಹಾಕಿದ್ದ ಚಪ್ಪರದಲ್ಲಿ 20ರಿಂದ 25 ಸಾವಿರ ಮಂದಿಗೆ ಭೋಜನ ವಿತರಿಸಲಾಯಿತು. ಬಹುತೇಕರು ಬಫೆ ಪದ್ಧತಿಯಲ್ಲಿ ಊಟ ಮಾಡಿದರೆ, ಇನ್ನು ಕೆಲವರು ನೆಲಕ್ಕೆ ಹಾಕಿದ್ದ ಹಾಸಿನಲ್ಲಿ ಕುಳಿತುಕೊಂಡು ವಿಶೇಷ ಭೋಜನದ ರುಚಿಯನ್ನು ಸವಿದರು. ಪರ್ಯಾಯ ಉತ್ಸವ ಹಾಗೂ ದರ್ಬಾರ್‌ ಅನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರಿಗೆ […]