ಉಡುಪಿ: ಕೋವಿಡ್ ನಿಯಮ ಉಲ್ಲಂಘಿಸಿ ಮೆರವಣಿಗೆ; ಪ್ರಕರಣ ದಾಖಲು
ಉಡುಪಿ: ಯಾವುದೇ ಪೂರ್ವಾನುಮತಿ ಇಲ್ಲದೆ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪಕ್ಷದ 7ನೇ ಜಿಲ್ಲಾ ಸಮ್ಮೇಳನ ಸಭೆ ಆಯೋಜಕರ ಮೇಲೆ ಪ್ರಕರಣ ದಾಖಲಾಗಿದೆ. ನ. 28ರಂದು ಸಿಪಿಐ(ಎಂ) ಪಕ್ಷದ 7ನೇ ಜಿಲ್ಲಾ ಸಮ್ಮೇಳನ ಸಭೆ ನಡೆಸಲು ಮಾತ್ರ ನಗರಸಭೆ ಅನುಮತಿ ನೀಡಿತ್ತು. ಆದರೆ, ಆಯೋಜಕರು ಅಂದು ಬೆಳಿಗ್ಗೆ 11 ಗಂಟೆಗೆ ಯಾವುದೇ ಪೂರ್ವಾನುಮತಿ ಇಲ್ಲದೆ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಉಡುಪಿ ಬೋರ್ಡ್‌ಹೈಸ್ಕೂಲ್‌ನಿಂದ ಬ್ರಹ್ಮಗಿರಿ ವೃತ್ತದ ತನಕ ಮೆರವಣಿಗೆ ನಡೆಸಿದ್ದರು. ಇದರಲ್ಲಿ ಕೆಲವರು […]