ಉಡುಪಿ: ಮಿಷನ್ ಆಸ್ಪತ್ರೆಯ ಹಿರಿಯ ನಾಗರಿಕರ ನರ್ಸಿಂಗ್ ಕೇರ್ ಯುನಿಟ್ ‘ಕರುಣಾಲಯ’ ಉದ್ಘಾಟನೆ
ಉಡುಪಿ: ಉಡುಪಿಯ ಲೋಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ರತ್ರೆಯ ವತಿಯಿಂದ ಕೊರಂಗ್ರಪಾಡಿ ಬೈಲೂರಿನಲ್ಲಿ ಹೊಸದಾಗಿ ಸ್ಥಾಪಿಸಲಾದ ಹಿರಿಯ ನಾಗರಿಕರ ನರ್ಸಿಂಗ್ ಕೇರ್ ಯುನಿಟ್ ‘ಕರುಣಾಲಯ’ ಶುಕ್ರವಾರ ಉದ್ಘಾಟನೆಗೊಂಡಿತು. ಯುನಿಟ್ ಅನ್ನು ಉದ್ಘಾಟಿಸಿ ಸಿಎಸ್‌ಐ ಕೆಎಸ್‌ಡಿ ಬಿಷಪ್ ರೆ.ಮೋಹನ್ ಮನೋರಾಜ್ ಮಾತನಾಡಿ, ಯುವ ಜನತೆ ಹಾಗೂ ಹಿರಿಯ ನಾಗರಿಕರು ಜೊತೆಯಾಗಿ ಸಾಗಿದಾಗ ಸ್ವಸ್ಥ ಸಮಾಜ ನಿರ್ಮಾಣ ಮಾಡಬಹುದು. ಹಿರಿಯ ನಾಗರಿಕರನ್ನು ಮೂಲೆಗುಂಪು ಮಾಡುವ ಬದಲು ಅವರಲ್ಲಿನ ಜ್ಞಾನ, ಅನುಭವವನ್ನು ನಾವು ಪಡೆದುಕೊಳ್ಳಬೇಕು. ಇದರಿಂದ ನಮ್ಮ ಬೆಳವಣಿಗೆ ಸಾಧ್ಯವಾಗಲಿದೆ. ಹಿರಿಯ ನಾಗರಿಕರು […]