ಉಡುಪಿ:ಅನಧಿಕೃತ ಪ್ರಾಣಿಗಳ ಪಾರುಗಾಣಿಕಾ ಕೇಂದ್ರಕ್ಕೆ ಸಾಕುಪ್ರಾಣಿಗಳನ್ನು ಬಿಡದಂತೆ ಸೂಚನೆ

ಉಡುಪಿ: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನೊಂದಣಿಯಿಲ್ಲದೆ ಬ್ರಹ್ಮಾವರ ತಾಲೂಕು ಕೆರೆಕಟ್ಟೆಮನೆಯ ಬಿ.ಸುದೀಂದ್ರ ಐತಾಳ್ ಇವರು ಅನಧಿಕೃತವಾಗಿ ಪ್ರಾಣಿಗಳ ಪಾರುಗಾಣಿಕಾ ಕೇಂದ್ರವನ್ನು (ಎನಿಮಲ್ ರೆಸ್ಕ್ಯು ಸೆಂಟರ್) ನಡೆಸುತ್ತಿದ್ದು, ಮೂಲಭೂತ ಸೌಕರ್ಯಗಳ ಕೊರತೆ, ಆಹಾರ, ನೀರು, ಸ್ವಚ್ಛತೆ, ಲಸಿಕೆ, ಚಿಕಿತ್ಸೆ ಇತ್ಯಾದಿ ದಾಖಲೆಗಳು ಇರುವುದಿಲ್ಲ. ಆದ್ದರಿಂದ ಇದು ಪ್ರಾಣಿ ಹಿಂಸೆತಡೆ ಕಾಯ್ದೆ 1960 ರ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಈ ಪ್ರಾಣಿಗಳ ಪಾರುಗಾಣಿಕೆ ಕೇಂದ್ರದಲ್ಲಿ ಇನ್ನು ಮುಂದೆ ನಾಯಿ, ಬೆಕ್ಕು, ಮುದ್ದಿನ ಪಕ್ಷಿಗಳುಇತ್ಯಾದಿಗಳನ್ನು ನೀಡಬಾರದು. ಅನಾಥ, ಅಂಗವಿಕಲ ಮತ್ತು […]