Tag: #udupi #news
-
ಹೋಂ ಕ್ವಾರಂಟೈನ್ ಉಲ್ಲಂಘನೆ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ
ಉಡುಪಿ ಜೂನ್ 6: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ವಿಧಿಸಿದ್ದ ಲಾಕ್ ಡೌನ್ ಆದೇಶ ಸಡಿಲವಾದ ನಂತರ , ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ಸಾರ್ವಜನಿಕರು ತಮ್ಮ ರಾಜ್ಯಗಳಿಗೆ ತೆರಳು ಅನುಮತಿ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಗೆ ಸಹ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ನಾಗರೀಕರು ಅಗಮಿಸುತ್ತಿದ್ದಾರೆ. ಇವರನ್ನು ಕ್ವಾರಂಟೈನ್ ಮಾಡಲು ಸರ್ಕಾರದ ಸೂಚನೆಯಿದ್ದು, ಈ ರೀತಿ ಕ್ವಾರಂಟೈನ್ ನಲ್ಲಿರುವವರು, ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದು, ಇಂತಹವರನ್ನು ಗುರುತಿಸಿ, ಅವರ ವಿರುದ್ದ ಎಫ್.ಐ.ಆರ್. ದಾಖಲಿಸಲು, ಉಡುಪಿ ಜಿಲ್ಲೆಯಲ್ಲಿ…
-
ಜಲ್ ಜೀವನ್ ಮಿಷನ್: ಜಿಲ್ಲೆಯಿಂದ 415 ಕೋಟಿ ರೂ. ಪ್ರಸ್ತಾವನೆ
ಉಡುಪಿ ಮೇ 18: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ , ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಒಗದಿಸಲು ರೂ.415 ಕೋಟಿ ರೂ ಗಳ ಕ್ರಿಯ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು , ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜಲ ಜೀವನ್ ಮಿಷನ್ ಯೋಜನೆಯಡಿ 2024 ರೊಳಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ವರ್ಷದ 365 ದಿನವೂ, ದಿನಕ್ಕೆ…
-
ಉಡುಪಿ: ವಿಪರೀತ ಮದ್ಯಸೇವನೆಯಿಂದ ಅಪರಿಚಿತ ವ್ಯಕ್ತಿಯ ಸಾವು
ಉಡುಪಿ: ಸ್ವರ್ಣ ಅರ್ಕೆಡ್ ಬಳಿ ಪಾದಚಾರಿ ರಸ್ತೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ವಿಪರೀತ ಮದ್ಯಸೇವನೆ ಮಾಡಿ ಅಸ್ವಸ್ಥಗೊಂಡು ರಸ್ತೆಯ ಬಳಿ ಬಿದ್ದಿದ್ದನು. ಈತನನ್ನು ಗುರುವಾರ ಮುಂಜಾನೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಅತಿಯಾದ ಮದ್ಯಸೇವನೆಯು ಈತನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಈತನ ವಿಳಾಸ ತಿಳಿದು ಬಂದಿಲ್ಲ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ವಾರಸುದಾರರು ತುರ್ತು…
-
ಗೋಪುರಕ್ಕೆ ಡಿಕ್ಕಿ ಹೊಡೆದ ಕಾರು: ಪಾನಮತ್ತರಾಗಿದ್ದ ಇಬ್ಬರು ಗಂಭೀರ
ಉಡುಪಿ: ಇಲ್ಲಿನ ಚಿತ್ತರಂಜನ್ ಸರ್ಕಲ್ ಬಳಿ ಇರುವ ವೃತ್ತ ಗೋಪುರಕ್ಕೆ ಸೋಮವಾರ ತಡರಾತ್ರಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕಾರಿನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರು ಪಾನಮತ್ತರಾಗಿದ್ದರು. ಚಾಲಕ ಕೂಡ ಪಾನಮತ್ತನಾಗಿದ್ದು, ಅತೀ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಒಳಕಾಡು ನಿವಾಸಿಗಳಾದ ವೇಂಕಟೇಶ ಪ್ರಭು (47), ಸಂತೋಷ್ ಶೇಟ್ (42 ) ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಸಮಾಜಸೇವಕ ನಿತ್ಯಾನಂದ…
-
ನಾಗರಿಕ ಸಮಿತಿಯಿಂದ 100 ಗಡ್ಡಧಾರಿಗಳಿಗೆ ಉಚಿತ ಶೇವಿಂಗ್ ಸೆಟ್ ವಿತರಣೆ
ಉಡುಪಿ: ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಶರೀರ ಸ್ವಚ್ಚತೆ ಕಾಪಾಡಲು ಸಮಸ್ಯೆ ಎದುರಾಗಿದೆ. ಸೆಲೂನ್ ಅಂಗಡಿಗಳು ಬಾಗಿಲು ಮುಚ್ಚಿಕೊಂಡಿವುದರಿಂದ ಎಲ್ಲರು ಗಡ್ಡಧಾರಿಗಳಾಗಿದ್ದರು. ಇದರಿಂದ ಇವರೆಲ್ಲರೂ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬೆಳೆದು ನಿಂತಿರುವ ಗಡ್ಡದಿಂದಾಗಿ ಸೆಖೆಯಲ್ಲಿ ಕೆಲವರಿಗೆ ತುರಿಕೆ, ಕೆಲವರ ಗಡ್ಡದಲ್ಲಿ ಹೇನಿನ ಸಂಚಾರ, ಚರ್ಮವ್ಯಾಧಿಯ ಲಕ್ಷಣಗಳು, ಊಟ ಮಾಡುವವಾಗ ಮೀಸೆ ಗಡ್ಡಗಳಿಗೆ ಅಂಟಿಕೊಳ್ಳುವ ಅನ್ನ ಸಾಂಬರು, ಅಂದ ಕಳೆದಿರುವ ಮುಖ ಸೌಂದರ್ಯ. ಇವುಗಳೆಲ್ಲ ಸಮಸ್ಯೆಗಳು ಸೇವಿಂಗ್ ಮಾಡಿಕೊಳ್ಳಲು ಅಸಹಾಯಕತೆ ಎದುರಾದರಿಂದ ವಲಸೆ ಕಾರ್ಮಿಕರು ಎದುರಿಸಬೇಕಾಯಿತು.…